ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ
K-SET Exam Application Started 2025 /K-SET ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ 2025
G ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(K-SET)2025ಕ್ಕೆ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ಪರೀಕ್ಷೆಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಅರ್ಹತೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.
K-SET ಪರೀಕ್ಷೆಯ ಮಹತ್ವ
ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳು, ಪ್ರಥಮ ದರ್ಜೆ ಪದವಿ ಕಾಲೇಜುಗಳು ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಪಡೆಯಲು ಅರ್ಹತೆ ಹೊಂದಿರುತ್ತಾರೆ.
33 ವಿಷಯಗಳಲ್ಲಿ ಈ ವರ್ಷ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ, ಅದಿ ಸೂಚನೆಯ ಲಿಂಕನ್ನು ಈ ಕೆಳಗೆ ನೀಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಓದಿ.
ಈ ಪರೀಕ್ಷೆ ಬರೆಯಲು ಅರ್ಹತೆಗಳು
ಶೈಕ್ಷಣಿಕ ಅರ್ಹತೆ
. ಅಭ್ಯರ್ಥಿಗಳು UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ (Master’s Degree) ಅಥವಾ ಸಮಾನವಾದ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಪಡೆದಿರಬೇಕಾ ಗಿರುತ್ತದೆ.
. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಪಡೆದಿರಬೇಕು.
. ಎಸ್ಸಿ,ಎಸ್ಟಿ, ಒಬಿಸಿ ( Cat-1,IIA, IIB, IIIA, IIIB), PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ಕನಿಷ್ಠ-50% ಅಂಕಗಳು ಪಡೆದಿರಬೇಕು.
2).ಪ್ರಸ್ತುತವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.
. ಸ್ನಾತಕೋತರ ಪಠ್ಯಕ್ರಮದ ಪ್ರಥಮ ಅಥವಾ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.
. ಆದರೆ ಅವರು ತಮ್ಮ ಪೂರ್ಣಗೊಂಡ ಪದವಿಯ ಅಂಕಪಟ್ಟಿಯನ್ನು ಎರಡು ವರ್ಷಗಳ ಒಳಗಾಗಿ ಸಲ್ಲಿಸಬೇಕು. ಸಲ್ಲಿಸಲು ಸಾಧ್ಯವಾಗದಿದ್ದರೆ ಅರ್ಹತೆಯನ್ನು ರದ್ದುಪಡಿಸಲಾಗುತ್ತದೆ.
3 ) ಪರೀಕ್ಷೆಗೆ ಹಾಜರಾಗುವ ವಿಷಯ
. ಅಭ್ಯರ್ಥಿಗಳು ತಮ್ಮ ಸ್ನಾತಕೋತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಪರೀಕ್ಷೆ ಬರೆಯಬೇಕು.
. ಅದಿಸೂಚನೆಯಲ್ಲಿ ಇರದ ವಿಷಯಗಳಿಗೆ ಅಭ್ಯರ್ಥಿಗಳು UGC-NET ಅಥವಾ UGC- CSIR-NET ಪರೀಕ್ಷೆ ಬರೆಯಬಹುದಾಗಿದೆ.
4) ವಿಶೇಷ ವಿನಾಯಿತಿಗಳು
.1991ರ ಸಪ್ಟೆಂಬರ್ 19ರೊಳಗೆ ಸ್ನಾತಕೋತರ ಪದವಿ ಪೂರ್ಣಗೊಳಿಸಿ ಪಿಎಚ್ಡಿ (PHD) ಪಡೆದವರಿಗೆ 5% ಅಂಕಗಳ ವಿನಾಯಿತಿ.
. 1989 ರೊಳಗೆ UGC- NET/CSIR-NET/JRF ತೇರ್ಗಡೆಯಾದವರು, ಅಥವಾ 2002 ರ ಜೂನ್ 1 ರೊಳಗೆ ನಡೆದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಯಾದವರು K-SET ಬರೆಯುವ ಅಗತ್ಯವಿಲ್ಲ.
ಮೀಸಲಾತಿ ನಿಯಮಗಳು
.ಎಸ್ಸಿ,ಎಸ್ಟಿ, ಒಬಿಸಿ ( Cat-1,IIA, IIB, IIIA, IIIB), PwD ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು ಮೀಸಲಾತಿಗೆ ಅರ್ಹರಾಗಲು ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸಲೇ ಬೇಕು.
. ಹೊರ ರಾಜ್ಯದ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯು ಅನ್ವಯಿಸುವುದಿಲ್ಲ.
. ಬೇರೆ ರಾಜ್ಯದ ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.
ಪ್ರಮುಖ ಮಾಹಿತಿ ಹಾಗೂ ಮುಖ್ಯ ಎಚ್ಚರಿಕೆಗಳು
. ಅಭ್ಯರ್ಥಿಗಳು ಅರ್ಜಿ ಸಲ್ಲಿಕ್ಕೆ ತಾತ್ಕಾಲಿಕವಾಗಿದ್ದು, ನಂತರ ಅವರು ನೀಡಿರುವ ಅರ್ಹತಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
. ಈಗಾಗಲೇ K-SET ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಪುನಹ ಅದೇ ವಿಷಯದಲ್ಲಿ ಮತ್ತೆ ಅರ್ಜಿ ಯನ್ನು ಸಲ್ಲಿಸಲು ಅವಕಾಶವಿಲ್ಲ.
. ಅಭ್ಯರ್ಥಿಗಳು ತಾವು ನೀಡಿರುವ ದಾಖಲೆಗಳು ಸುಳ್ಳು ಎಂದು ಸಾಬೀತಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತ್ವ ತಕ್ಷಣವೇ ರದ್ದಪಡಿಸಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು.
. ಡಿಪ್ಲೋಮೋ ಅಥವಾ ವಿದೇಶಿ ಪದವಿ ಹೊಂದಿರುವ ವಂತಹ ಅಭ್ಯರ್ಥಿಗಳು ಅದನ್ನು AIU( Association of Indian universities) ಮಾನ್ಯತೆ ಪಡೆದ ಸ್ನಾತಕೋತರ ಪದವಿಗೆ ಸಮಾನ ಎಂದು ಮೊದಲು ತಿಳಿದುಕೋಳಿ.
ವಯೋಮಿತಿ
ಪರೀಕ್ಷೆ ಬರೆಯಲು ಯಾವುದೇ ಗರಿಷ್ಠ ವಯೋಮತಿ ಇಲ್ಲ, ಆದಕಾರಣ ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿರುವ ಯಾರಾದರೂ ಪರೀಕ್ಷೆಗೆ ಅರ್ಜಿ ಹಾಕಬಹುದಾಗಿದೆ.
ಪರೀಕ್ಷೆಯ ಫಲಿತಾಂಶ ಹಾಗೂ ಮಹತ್ವ
. KSET ಪರೀಕ್ಷೆಯಲ್ಲಿ ತೇರ್ಗಡೆ ಯಾದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ಆದರೆ, 01,ಜೂನ್ 2002ರ ನಂತರ KSET ಉತ್ತೀರ್ಣ ಆಗಿರುವರು, ಕೇವಲ ಕರ್ನಾಟಕ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಲ್ಲಷ್ಟೇ ನೇಮಕಾತಿಗೆ ಅರ್ಹರಾಗಿರುತಾರೆ.
ಬೋಧಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ, ಅರ್ಹ ಅಭ್ಯರ್ಥಿಗಳು ತಪ್ಪದೆ ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ,
NOTE- ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಗಮನವಿಟ್ಟು ಓದಿಕೋಳಿ.
| ಪ್ರಮುಖ ದಿನಾಂಕಗಳು | ದಿನಾಂಕ |
|---|---|
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 28/08/2025 |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 18/09/2025 |
ಅರ್ಜಿ ಸಲ್ಲಿಸುವುದು ಹೇಗೆ ?/How to Apply
ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.
ಪ್ರಮುಖ ಲಿಂಕ್ ಗಳು
| ಅರ್ಜಿಸಲಿಸುವ ಲಿಂಕ್ | 1) ಇಲ್ಲಿ ಕ್ಲಿಕ್ ಮಾಡಿ 2)ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | 1) ಇಲ್ಲಿ ಕ್ಲಿಕ್ ಮಾಡಿ 2)ಇಲ್ಲಿ ಕ್ಲಿಕ್ ಮಾಡಿ |
| ಇನ್ಸ್ಟಾಗ್ರಾಮ್ ಲಿಂಕ್ 01 | ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ ) |
ಕೊನೆಯದಾಗಿ
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.