Indian Premier League 2025 Award Information With their Prize 2025/ಈ ವರ್ಷದ ಐಪಿಎಲ್ -2025 ರ ಪ್ರಶಸ್ತಿ ವಿಜೇತರಿಗೆ ಎಷ್ಟು ಬಹುಮಾನ ದೊರಕಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

IPL 2025 AWARD INFORMATION / ಐಪಿಎಲ್ 2025 ಯಾರಿಗೆ ಯಾವ ಪ್ರಶಸ್ತಿ ದೊರಕಿದೆ ಸಂಪೂರ್ಣ ಮಾಹಿತಿ

ಎಲ್ಲ ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಐಪಿಎಲ್ ನಲ್ಲಿ ವಿಜಯಸಾದಿಸಿದ ತಂಡಕ್ಕೆ ನೀಡಲಾಗುವ ಬಹುಮಾನದ ಜೊತೆಗೆ ಇತರ ಪ್ರಶಸ್ತಿಗಳು ಇರುತ್ತವೆ, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.ನಾವು ತಿಳಿಸುವ ಎಲ್ಲ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,ಕೂಡಲೇ ನಮ್ಮ ಗಮನಕ್ಕೆ ತನ್ನಿ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ನಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ 2025 ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆದ್ದು ಈ ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.

  1. ಈ ಚಾಂಪಿಯನ್ ಪಟ್ಟದೊಂದಿಗೆ ಆರ್‌ಸಿಬಿ ತಂಡ ಬಹುಮಾನ ಮೊತ್ತವಾಗಿ 20 ಕೋಟಿ ರೂಪಾಯಿ ತನ್ನದಾಗಿಸಿಕೊಂಡಿದೆ.
  2. ಐಪಿಎಲ್ 2025 ರನ್ನ ರ್ ಅಪ್ ಪಂಜಾಬ್ ಕಿಂಗ್ಸ್ ತಂಡವು 12.5 ಕೋಟಿ ರೂಪಾಯಿ ಪಡೆದುಕೊಂಡಿರುತ್ತದೆ.
  3. ಅರ್ಹತಾ ಸುತ್ತಿನ ತಂಡ 07 ಕೋಟಿ ರೂ ಬಹುಮಾನ ಮೊತ್ತವನ್ನು, ಹಾಗೂ ಎಲಿಮಿನೇಟರ್ ತಂಡವು 6.5 ಕೋಟಿ ರೂ ಬಹುಮಾನ ಮೊತ್ತವನ್ನು ಪಡೆದುಕೊಂಡಿತು.

ತಂಡಗಳಿಗೆ ನೀಡಲಾಗುವ ಬಹುಮಾನದ ಜೊತೆಗೆ ಇತರ ಪ್ರಶಸ್ತಿಗಳು ಇರುತ್ತವೆ, ಅವುಗಳು.

  • .ಆರೆಂಜ್ ಕ್ಯಾಪ್
  • .ಪರ್ಪಲ್ ಕ್ಯಾಪ್
  • .ಫೇರ್ ಪ್ಲೇ ಪ್ರಶಸ್ತಿ
  • .ಫ್ಯಾಂಟಸಿ ಕಿಂಗ್ ಆಫ್ ದಿ ಸೀಸನ್,
  • .ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್,
  • .ಬೆಸ್ಟ್ ಕ್ಯಾಚ್, ಮೋಸ್ಟ ಸಿಕ್ಸ್ ಮತ್ತು ಮೋಸ್ಟ ವಾಲ್ಯುಯೇಬಲ್ ಪ್ಲೇಯರ್ ಮುಂತಾದ ಪ್ರಶಸ್ತಿಗಳು ಸೇರಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 2025 ಚಾಂಪಿಯನ್ ಪಟ್ಟ ಯಾವ ತಂಡಕ್ಕೆ ಲಭಿಸಿದೆ?
ANS– ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಇಂಡಿಯನ್ ಪ್ರೀಮಿಯರ್ ಲೀಗ್ 2025 ಚಾಂಪಿಯನ್ ಪಟ್ಟ ಪಡೆದ ತಂಡಕ್ಕೆ ನೀಡಿರುವ ಬಹುಮಾನದ ಮೊತ್ತ ಎಷ್ಟು?

ANSWER – 20 ಕೋಟಿ ರೂಪಾಯಿ

ಟೂರ್ನಿದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಟಗಾರರಿಗೆ ಯಾವ ಪ್ರಶಸ್ತಿ ಲಭಿಸಿದೆ ನೋಡೋಣ ಬನ್ನಿ ⬇️

ಟೂರ್ನಿದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರಿಗೆ ಈ ಬಾರಿ ಔರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ ಅದೇ ರೀತಿ ಬೌಲಿಂಗ್ ನಲ್ಲಿ 25 ವಿಕೆಟ್ ಪಡೆದ ಗುಜರಾತ್ ಟೈಟನ್ಸ್ ತಂಡದ ವೇಗಿ ಕನ್ನಡಿಗ ಕೃಷ್ಣ ಅವರು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.

ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು,
ಲಕ್ನೋ ಸೂಪರ್ ಜೆಂಟ್ಸ್ ತಂಡದ ನಿಕೋಲಸ್ ಫೋರನ್ ಅವರು 40 ಸಿಕ್ಸ್ ಬಾರಿಸುವ ಮೂಲಕ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಟೂರ್ನಿಯ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಪ್ರಶಸ್ತಿ ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ ಅವರು ಪಡೆದುಕೊಂಡಿದ್ದಾರೆ.

ಸೂಪರ್ ಸ್ಟ್ರೈಕರ್ ಆಫ್ ದಿ ಸಿಸನ್ ಪ್ರಶಸ್ತಿ ಯಾರಿಗೆ ನೀಡಲಾಗಿದೆ?
— > ವೈಭವ್ ಸೂರ್ಯವಂಶಿ.

ಅದ್ಭುತ ಸ್ಟ್ರೈಕ್ ರೇಟ್ ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಸಫಾರಿ ಕಾರು ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಪಡೆದುಕೊಂಡಿದ್ದಾರೆ. ಈ ಬಾರಿಯ ಟೂರ್ನಿಯ ಮೂಲಕ ಐಪಿಎಲ್ ಕರಿಯರ್ ಆರಂಭಿಸಿದ ಸೂರ್ಯವಂಶಿ, ಚೊಚ್ಚಲ ಪಂದ್ಯಾವಳಿಯಲ್ಲಿಯೇ ಪ್ರಮುಖ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 07 ಪಂದ್ಯಗಳಲ್ಲಿ ಬ್ಯಾಟ ಬಿಸಿರುವ ವೈಭವ ಸೂರ್ಯವಂಶಿ ಒಂದು ಶತಕದೊಂದಿಗೆ ಒಟ್ಟು 256 ರನ್ನ ಪಡೆದಿದ್ದಾರೆ. ಅದು ಸಹ 206.55 ರ ಸ್ಟ್ರೈಕ್ ರೇಟ್ ನಲ್ಲಿ ಎಂಬುದು ವಿಶೇಷವಾಗಿದೆ. ಈ ವರ್ಷದ ಸೂಪರ್ ಸ್ಟ್ರೈಕರ್ ಅನ್ನಿಸಿಕೊಂಡು, ಸೂಪರ್ ಸ್ಟ್ರೈಕರ್ ಗೆ ನೀಡಲಾಗುವ ಟಾಟಾ ಕರ್ವ್ ಕಾರು 14 ವರ್ಷದ ವೈಭವ ಸೂರ್ಯವಂಶಿ ಪಾಲಾಗಿದೆ.

ಈಗ ಪ್ರಶಸ್ತಿಗಳ ಸಂಪೂರ್ಣ ಮಾಹಿತಿ ಬನ್ನಿ/Awards Information with Amount ⬇️

  • .ಫೈನಲ್ ಪಂದ್ಯದ ಸೂಪರ್ ಸ್ಟ್ರೈಕರ್ ಇವರಿಗೆ ದೊರಕಿದೆ – ಜಿತೇಶ್ ಶರ್ಮ (1 ಲಕ್ಷ ರೂಪಾಯಿ)
  • . ಫ್ಯಾಂಟಸಿ ಕಿಂಗ್ ಆಫ್ ದಿ ಮ್ಯಾಚ್- ಶಶಾಂಕ್ ಸಿಂಗ್ (1 ಲಕ್ಷ ರೂಪಾಯಿ)
  • . ಫೈನಲ್ ಪಂದ್ಯದಲ್ಲಿ ಸೂಪರ್ ಸಿಕ್ಸರ್ – ಶಶಾಂಕ್ ಸಿಂಗ್ (1 ಲಕ್ಷ ರೂಪಾಯಿ)
  • . ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ – ಕೃನಾಲ್ ಪಾಂಡ್ಯ (5 ಲಕ್ಷ ರೂಪಾಯಿ)
  • . ಫೈನಲ್ ಪಂದ್ಯದ ಗ್ರೀನ್ ಡಾಟ್ ಬಾಲ್ಗಳು ಇವರಿಗೆ ನೀಡಲಾಗಿದೆ – ಕೃನಾಲ್ ಪಾಂಡ್ಯ (1 ಲಕ್ಷ ರೂಪಾಯಿ)
  • ಈ ಸೀಸನ್ ನ ಉದಯೋನ್ಮುಖ ಆಟಗಾರ – ಸಾಯಿ ಸುದರ್ಶನ್ (10 ಲಕ್ಷ ರೂಪಾಯಿ)
  • .ಈ ಸೀಸನ್ ನ ಪರ್ಪಲ್ ಕ್ಯಾಪ್- ಪ್ರಸಿದ್ಧ ಕೃಷ್ಣ (10 ಲಕ್ಷ ರೂಪಾಯಿ )
  • .ಈ ಸೀಸನ್ ನ ಆರೆಂಜ್ ಕ್ಯಾಪ್ – ಸಾಯಿ ಸುದರ್ಶನ್ (10 ಲಕ್ಷ ರೂಪಾಯಿ ).
  • . ಈ ಸೀಸನ್ ಅತ್ಯಂತ ಮೌಲ್ಯಯುತ ಆಟಗಾರ – ಸೂರ್ಯ ಕುಮಾರ್ ಯಾದವ್(15 ಲಕ್ಷ ರೂಪಾಯಿ)
  • . ಈ ಸೀಸನ್ ನ ಅತ್ಯುತ್ತಮ ಪಿಚ್ ಹಾಗೂ ಮೈದಾನದ ಪ್ರಶಸ್ತಿ – ದೆಹಲಿ ಕ್ರಿಕೆಟ್ ಅಸೋಸಿಯೇಷನ್ (50 ಲಕ್ಷ ರೂಪಾಯಿ)
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

Leave a Comment