Vivo T4 Pro ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿ 2025/Information About VivoT4 Pro Smart Phone 2025

ಎಲ್ಲ ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರ
ಇಂದಿನ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ

Vivo T4 Pro 5G ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ ಬನ್ನಿ ಈ ಸ್ಮಾರ್ಟ್ ಫೋನ್ ನ ಬಗ್ಗೆ ಮಾಹಿತಿ ತಿಳಿಯೋಣ.

Vivo T4 Pro ಸ್ಮಾರ್ಟ್ ಫೋನ್, ಇದರ ಬೆಲೆ ಎಷ್ಟು, ಇದರ ಸ್ಟೋರೇಜ್ ಕೆಪ್ಯಾಸಿಟಿ, ಇದರ ಮಾರ್ಕೆಟ್ ಬೆಲೆ ಎಷ್ಟು, ಈ ಸ್ಮಾರ್ಟ್ ಫೋನ್ ನ ಕ್ಯಾಮೆರಾ, ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ

ಭಾರತದಲ್ಲಿ ಬಹುನಿರೀಕ್ಷಿತ Vivo T4 Pro ಫೋನ್ ಬಿಡುಗಡೆಯಾಗಿದೆ.

Vivo T4 Pro ಫೋನ್ ಭರ್ಜರಿ ಎಂಟ್ರಿ ಯಾಗಿದು,
7 Gen 4 SoC ಚಿಪ್ ಸೆಟ್, 50- ಮೆಗಾ ಪಿಕ್ಸೆಲ್ ಸೋನಿ IMX882 ಪೆರಿ ಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು Google Gemini ಅಪ್ಲಿಕೇಶನ್ ನೊಂದಿಗೆ ಪೂರ್ವ ಸ್ಥಾಪಿತವಾಗಿ ಬಂದಿರುವ ಮೊದಲ ಫೋನ್ ಗಳಲ್ಲಿ ಒಂದಾಗಿದೆ.

ಬನ್ನಿ Vivo T4 Pro ಫೋನ್ ಹೇಗಿದೆ? ಬೆಲೆ ಎಷ್ಟು ಎಂಬುದನ್ನು ನೋಡೋಣ.

Vivo T4 Pro ಸ್ಮಾರ್ಟ್ ಫೋನ್
ಪ್ರಮುಖ ವೈಶಿಷ್ಟ್ಯಗಳು :

Vivo T4 Pro ಸ್ಮಾರ್ಟ್ ಫೋನ್ 6.77- ಇಂಚಿನ ಕ್ವಾಡ್- ಕರ್ವ್ಡ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ, ಇದು 120 Hz ರಿಫ್ರೇಶ್ ರೇಟ್, 5,000 ನಿಟ್ಸ್ ಸ್ಥಳೀಯ ಪೀಕ್ ಬ್ರೈಟ್ನೆಸ್ ಮತ್ತು 1,500ನಿಟ್ಸ್ ಜಾಗತಿಕ ಪೀಕ್ ಬ್ರೈಟ್ನೆಸ್ ಮಟ್ಟವನ್ನು ಬೆಂಬಲಿಸುತ್ತದೆ, ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ, ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ದೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್ ಹೊಂದಿರುವ ಈ ಫೋನ್, ಅದೇ ರೀತಿ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಹೊಂದಿರುತ್ತದೆ.

ಕಾರ್ಯಕ್ಷಮತೆ ವಿಭಾಗದಲ್ಲಿ Vivo T4 Pro ಸ್ಮಾರ್ಟ್ ಫೋನ್ ಸ್ನಾಪ್ ಡ್ರ್ಯಾಗನ್ 7 Gen 4 SoC ಚಿಪ್ ಸೆಟ್ ನಿಂದ ಚಾಲಿತ ವಾಗಿದ್ದು, ಇದು 12GB ವರೆಗೆ LPDDR4x RAM ಮತ್ತು 256GB ವರೆಗೆ UFS 2.2 ಸಂಗ್ರಹಣೆಯನ್ನು oಒಳಗೊಂಡಿದೆ, ಇದರಲ್ಲಿ 16,470 ಚದರ ಮಿಮೀ 10- ಲೆಯರ್ ವಿ. ಸಿ ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

Vivo T4 Pro ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ನಾಲ್ಕು ವರ್ಷಗಳ ಪ್ರಮುಖ ಓಸ್ ಅಪ್ ಗ್ರೇಡ್ ಗಳು ಹಾಗೂ ಆರು ವರ್ಷಗಳ ಭದ್ರತಾ ನವೀಕರಣಗಳನ್ನು ಹೊಂದಿದೆ

ಫೋಟೋಗ್ರಾಫಿ ಪ್ರಿಯರಿಗಾಗಿ ಈ ಫೋನ್ ಪ್ರಭಾವಶಾಲಿ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೇಬಲೈಜೇಷನ್ (OIS) ಬೆಂಬಲದೊಂದಿಗೆ 50- ಮೆಗಾ ಪಿಕ್ಸೆಲ್ ಸೋನಿ IMX882 ಪೆರಿಸ್ಕೋಪ್ ಟೆಲಿ ಫೋಟೋ ಕ್ಯಾಮೆರಾ ಮತ್ತು 2- ಮೆಗಾ ಪಿಕ್ಸೆಲ್ ಭೋಕೆ ಕ್ಯಾಮೆರಾ ಅನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32- ಮೆಗಾ ಪಿಕ್ಸೆಲ್ ಸೆನ್ಸರ್ ಇದೆ. ಇದು AI ಪ್ರೊಫೆಷನಲ್ ಪೋಟ್ರೇಟ್, AI ಎರೆಸ್ 3.0,AI ಮ್ಯಾಜಿಕ್ ಮೂವ್, AI ಇಮೇಜ್ ಎಕ್ಷ ಪಾಂಡರ ಮತ್ತು AI ಫೋಟೋ ಎನ್ಹನ್ಸ್ ನಂತಹ ಅನೇಕ AI ಇಮೇಜಿಂಗ್ ವಿಶಿಷ್ಟಗಳೊಂದಿಗೆ ಕೂಡಿದೆ.

Vivo T4 Pro ಸ್ಮಾರ್ಟ್ ಫೋನ್ ಬ್ಯಾಟರಿ ಸಾಮರ್ಥ್ಯ :


ಈ ಫೋನ್ 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಸಿಲಿಕಾನ್- ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ, ಜೊತೆಗೆ ಫೋನಿನಲ್ಲಿ Google Gemini ಅಪ್ಲಿಕೇಶನ್ ನೊಂದಿಗೆ ಪೂರ್ವ ಸ್ಥಾಪಿತವಾಗಿದ್ದು, ಇತ್ತೀಚಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ವಶಿಷ್ಠತೆಗಳಿವೆ,

ಸಂಪರ್ಕ ಆಯ್ಕೆಗಳಲ್ಲಿ 5G, 4G, ವೈಫೈ 6, ಬ್ಲೂಟೂತ್ 5.4, ಜಿಪಿಎಸ್ ಮತ್ತು USB ಟೈಪ್ ಸಿ ಸಂಪರ್ಕವಶಿಷ್ಟಗಳು ಹೊಂದಿದೆ. ಇದು ಕೇವಲ 7.53 ಮಿಮೀ ದಪ್ಪ ಮತ್ತು 192 ಗ್ರಾಂ ತೂಕದೊಂದಿಗೆ, ಈ ಹ್ಯಾಂಡ್ ಸೆಟ್ ಉತ್ತಮ ಹಿಡಿತ ಮತ್ತು ಹಗುರವಾದ ಅನುಭವ ವನ್ನು ನೀಡುತ್ತದೆ.

Vivo T4 Pro ಸ್ಮಾರ್ಟ್ ಫೋನ್ ಬೆಲೆ ಮತ್ತು ಲಭ್ಯತೆ


ದೇಶದಲ್ಲಿ ಹೊಸ Vivo T4 Pro ಮೂರು ವಿಬ್ಬಿನ ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆ,
ಇದರ ಆರಂಭಿಕ ಬೆಲೆ 8GB RAM ಮತ್ತು 128GB Storage ಗೆ 27,999 ಪ್ರಾರಂಭ ವಾಗುತ್ತದೆ. ಅದೇ ರೀತಿ 8GB+256 GB ಗೆ 29,999 ಮತ್ತು, 12GB+256 GB ಗೆ ₹31,999 ಬೆಲೆ ನಿಗದಿಪಡಿಸಲಾಗಿದೆ.

ಈ ಸ್ಮಾರ್ಟ್ ಫೋನ್ ಬ್ಲೆಜ್ ಗೋಲ್ಡ್ ಮತ್ತು ನೈಟ್ರೋ ಬ್ಲೂ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

Vivo T4 Pro ಸ್ಮಾರ್ಟ್ ಫೋನ್ ಮಾರಾಟವು ಆಗಸ್ಟ್ 29 ರಿಂದ ಪ್ರಾರಂಭ ವಾಗಿದೆ, ಗ್ರಾಹಕರು Vivo India ಇ- ಸ್ಟೋರ್, Flipkart ಮತ್ತು ಕೆಲವು Offline ಮಳಿಗೆಗಳಲಿ ಲಭ್ಯವಿರುತ್ತದೆ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ವ್ಯಕ್ತಿ ಯಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.

ಪ್ರಮುಖ ಲಿಂಕ್ ಗಳು

ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

Leave a Comment