Vidyasiri Scholarship For Post Matric Students 2025/ವಿದ್ಯಾಸಿರಿ ಮೆಟ್ರಿಕ್ ನಂತರದ ಕೋರ್ಸುಗಳ ವಿದ್ಯಾರ್ಥಿ ವೇತನ 2025

ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿವೇತನ ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿರುತ್ತದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

Vidyasiri Scholarship FOR Post Matric Students For OBC 2025 / ವಿದ್ಯಾಸಿರಿ ವಿದ್ಯಾರ್ಥಿ ವೇತನ ಮೆಟ್ರಿಕ್ ನಂತರದ ಮೆಟ್ರಿಕ್ ನಂತರದ ಕೋರ್ಸುಗಳ ವಿದ್ಯಾರ್ಥಿ ವೇತನ 2025

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿವೇತನ ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿರುತ್ತದೆ.

ಇಲಾಖೆಯು ನಿಗದಿಪಡಿಸಿರುವಂತಹ ಕೊನೆಯ ದಿನಾಂಕದೊಳಗೆ ಎಲ್ಲಾ ಅಗತ್ಯ ಧಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ, ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು, ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ,ಅರ್ಹತೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಈ ಕೆಳಗೆ ನೀಡಲಾಗಿದೆ.

Vidyasiri Scholarship 2025 For Post Matric Students

ವಿದ್ಯಾರ್ಥಿ ವೇತನ ಹೆಸರು – SSP ಮೆಟ್ರಿಕ್ ನಂತರದ ಕೋರ್ಸುಗಳ ವಿದ್ಯಾರ್ಥಿ ವೇತನ
ಇಲಾಖೆ ಹೆಸರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Vidyasiri Scholarship Eligibility/ ವಿದ್ಯಾಸಿರಿ ವಿದ್ಯಾರ್ಥಿ ವೇತನ ಅರ್ಹತೆ


ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವಿದ್ಯಾಭಾಸ ಮಾಡುತ್ತಿರುವಂತಹ ಅರ್ಹ ಹಿಂದುಳಿದ ವರ್ಗಗಳ (ಒಬಿಸಿ,) ವಿದ್ಯಾರ್ಥಿಗಳು ಹಾಗೂ ಪ್ರವರ್ಗ -1 ಅಲೆಮಾರಿ ಹಾಗೂ ಅರೆ ಅಲೆಮಾರಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Uses Of This Scholarship Application /ಈ ಅರ್ಜಿಯನ್ನು ಸಲ್ಲಿಸುವುದರಿಂದ ಆಗುವ ಪ್ರಯೋಜನಗಳು?


ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ, ಮತ್ತು ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆ ಇವೆಲ್ಲ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ಸಿಗುವ ಸೌಲಭ್ಯಗಳಾಗಿವೆ.

Important documents/ಅಗತ್ಯ ದಾಖಲೆಗಳು

  1. ಆಧಾರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ತರಹ ಹೆಸರು
  2. ಮೊಬೈಲ್ ಸಂಖ್ಯೆ
  3. ಇ-ಮೇಲ್ ಐ.ಡಿ
  4. ಎಸ್ ಎಸ್ ಎಲ್ ಸಿ ನೋಂದಣಿ ಸಂಖ್ಯೆ
  5. ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ
  6. ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ ಬೇಕಾಗುತ್ತದೆ.
  7. ವಿದ್ಯಾರ್ಥಿಯು ವಾಸವಿರುವ ಜಿಲ್ಲೆ, ತಾಲೂಕು ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
  8. ಸಂಬಂಧಪಟ್ಟ ದಾಖಲೆಗಳ ಈ ದೃಢೀಕರಣ ಸಂಖ್ಯೆ ( ಅನ್ವಯವಾದಲ್ಲಿ )
  9. ವಿದ್ಯಾರ್ಥಿಯ ಕಾಲೇಜು ದಾಖಲಾತಿ / ನೊಂದಣಿ ಸಂಖ್ಯೆ ಹಾಸ್ಟೆಲ್ ವಿವರಗಳು ( ಅನ್ವಯವಾದಲ್ಲಿ)

How to Apply Vidya Siri Scholarship 2025 For OBC / ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ (ಓಬಿಸಿ ವಿದ್ಯಾರ್ಥಿಗಳಿಗೆ )ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ssp scholarship Portal-https://ssp.postmatrick.karnataka.gov.in ಮೂಲಕ ನಿಗದಿತ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ssp Vidya siri Scholarship 2025 Last Date?
ವಿದ್ಯಾಸಿರಿ ವಿದ್ಯಾರ್ಥಿವೇತನವನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಅರ್ಜಿಯನ್ನು ಸಲ್ಲಿಸಲು ನೀಡಿರುವ ಕೊನೆಯ ದಿನಾಂಕ – 30/09/2025

SSP Post Matric Scholarship 2025-26 For OBC
ಪ್ರಮುಖ ಲಿಂಕುಗಳು

ವಿದ್ಯಾಶ್ರೀ ವಿದ್ಯಾರ್ಥಿವೇತನ ಪ್ರಕಟಣೆ

ಪ್ರಮುಖ ಲಿಂಕ್ ಗಳು

ಪ್ರಮುಖ ದಿನಾಂಕಗಳುದಿನಾಂಕ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕಪ್ರಾರಂಭವಾಗಿದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/09/2025

ಪ್ರಮುಖ ಲಿಂಕ್ ಗಳು

ಅರ್ಜಿಸಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ವಿದ್ಯಾಶ್ರೀ ವಿದ್ಯಾರ್ಥಿವೇತನ ಪ್ರಕಟಣೆಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.

ಇದ್ದನು ಕೂಡ ಓದಿ —

Leave a Comment