Bigg Boss Kannada 12 Winner Gilli Nata 2026/ಬಿಗ್ಬಾಸ್ ಕನ್ನಡ ಸೀಸನ್12 ವಿನ್ನರ್ ಹಳ್ಳಿ ಹೈದ ಗಿಲ್ಲಿ ನಟ ಎಂದು ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ 2026
ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ‘ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್’ ಎಂದು ಘೋಷಣೆ ಮಾಡಿದ್ದಾರೆ
ರಾಜ್ಯದ ಜನತೆಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಗ್ಬಾಸ್ ಕನ್ನಡ ಸೀಸನ್-12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ವಿನ್ನರ್ (Bigg Boss winner) ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ (ನಟರಾಜ್) ಬಿಗ್ ಬಾಸ್ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ವಿನ್ನರ್ (Bigg Boss winner) ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾತುಗಾರ, ಹಳ್ಳಿ ಹೈದ ಗಿಲ್ಲಿ ನಟ (ನಟರಾಜ್) ಬಿಗ್ ಬಾಸ್ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಆ ಮೂಲಕ 112 ದಿನಗಳ ಬಿಗ್ ಶೋಗೆ ಇವತ್ತು ತೆರೆ ಬಿದ್ದಿದೆ.
ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ‘ಬಿಗ್ ಬಾಸ್ ವಿನ್ನರ್’ ಎಂದು ಘೋಷಣೆ ಮಾಡಿದ್ದಾರೆ. ಸುದೀಪ್ ಘೋಷಣೆ ಬೆನ್ನಲ್ಲೇ ಗಿಲ್ಲಿ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಗೆಲ್ಲಿ ಗೆಲುವಿಗಾಗಿ ವಿವಿಧ ಭಾಗಗಳಲ್ಲಿ ಪೂಜೆ, ಪುನಸ್ಕಾರ, ಅನ್ನದಾಸೋಹ ನಡೆದಿತ್ತು. ಜೊತೆಗೆ ದೊಡ್ಡ ದೊಡ್ಡ ಫ್ಲೆಕ್ಸ್, ಬ್ಯಾನರ್ಗಳ ಮೂಲಕ ವೋಟಿಂಗ್ ಪ್ರಚಾರ ನಡೆದಿತ್ತು.
ಬಿಗ್ ಬಾಸ್ ಸೀಸನ್ 12ಕ್ಕೆ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡು ವಿನ್ನರ್ ಪಟ್ಟ ತಮ್ಮ ದಾಗಿಸಿ ಕೊಂಡಿದಾರೆ.
.ಬರೀ ಕರ್ನಾಟಕ ಅಷ್ಟೇ ಅಲ್ಲದೆ ದೇಶ, ವಿದೇಶದಾದ್ಯಂತ ಸೇರಿ ಕೋಟ್ಯಂತರ ಅಭಿಮಾನಿಗಳ ಹಾರೈಕೆ ನಿಜವಾಗಿದೆ.
ಬಿಗ್ಬಾಸ್ ವಿನ್ನರ್ ಗೆ ಏನೆಲ್ಲಾ ಸಿಕ್ಕಿತು?
ಬಿಗ್ಬಾಸ್ 12 ವಿನ್ನರ್ ಗೆ ಪ್ರಾಯೋಜಕರಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ಕೊಟ್ಟಿದಾರೆ.
. ಇದರ ಜೊತೆಗೆ ಮಾರುತಿ ಸುಜುಕಿ ಅವರ ಕಡೆಯಿಂದ ಒಂದು ಕಾರನ್ನು ಸಹ ನೀಡಲಾಗಿರುತ್ತದೆ.
. ನಟ, ನಿರೂಪಕ ಕಿಚ್ಚ ಸುದೀಪ್ ಅವರ ಕಡೆಯಿಂದ ವೈಯಕ್ತಿಕವಾಗಿ 10,ಲಕ್ಷ ರೂಪಾಯಿ ನಗದು ಬಹುಮಾನವನ್ನು ಬಿಗ್ಬಾಸ್ ವಿನ್ನರ್ ಗೆ ನೀಡುತೇನೆ ಎಂದು ಹೇಳಿದ್ದಾರೆ.
ಈ ಬಾರಿಯ ಬಿಗ್ಬಾಸ್ ಟ್ರೋಫಿಯ ವಿಶೇಷತೆ
ಟ್ರೋಫಿ ವಿಶೇಷತೆ – ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನು ತುಂಬಾ ವಿಶಿಷ್ಟ ರೀತಿಯಲ್ಲಿ ಸಿದ್ದಪಡಿಸಲಾಗಿದೆ.
.ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಕಂಪು ಹಾಗೂ ಕರ್ನಾಟಕದ ಶ್ರೀಮಂತ ಇತಿಹಾಸ ಅದ. ಅದೇ ರೀತಿಯಲ್ಲಿ ಅದನ್ನೇ ಟ್ರೋಫಿಯಲ್ಲೂ ಸಹ ಅಳವಡಿಸಲಾಗಿರುತ್ತದೆ.
ಬಿಗ್ ಬಾಸ್ ಮನೆಯಲ್ಲಿ ಆನೆ, ದರ್ಪಣ ಸುಂದರಿ, ಅರಮನೆ ಇರುವಂತೆ ಟ್ರೋಫಿಯಲ್ಲೂ ನೀವು ನೋಡಬಹುದುರಿ.
ಟ್ರೋಫಿ ಮೇಲ್ಭಾಗದಲ್ಲಿ ಬಿಗ್ ಬಾಸ್ನ ಕಣ್ಣು ಇಡಲಾಗಿದೆ. ಆ ಕಣ್ಣಿನ ಒಳಗಡೆ ಕನ್ನಡದ ಸಂಖ್ಯೆಗಳನ್ನು ಕ್ಲಾಕ್ ರೀತಿಯಲ್ಲಿ ಜೋಡಿಸಿದಾರೆ.
.ಇದೇ ಮೊದಲ ಬಾರಿಗೆ ಕನ್ನಡದ ಡಿಂಡಿಮ ಬಿಗ್ ಬಾಸ್ 12 ರ ಟ್ರೋಫಿ ಮೇಲೆ ಮೇಳೈಸಿದೆ. ಹೀಗೆ ಈ ಬಾರಿಯ ಟ್ರೋಫಿ ವಿಶೇಷತೆಗಳನ್ನು ಒಳಗೊಂಡಿರುತ್ತದೆ.